ಮುಚ್ಚಿ

ತಲುಪುವ ಬಗೆ

ವಾಯುಮಾರ್ಗ

ಹುಬ್ಬಳ್ಳಿಯ ವಿಮಾನ ನಿಲ್ದಾಣವೂ ೩೬೯ ಎಕರೆ ಪ್ರದೇಶವನ್ನು ಹೊಂದಿದ್ದು. ಒಂದು ರನ್ವೇ ಉದ್ದ ೧.೬೭೦ ಮೀಟರ ೦೮/೨೬ ಆಧಾರಿತ ಹೊಂದಿದೆ. ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದ, ಗೋಕುಲ್ ರಸ್ತೆಯಲ್ಲಿ ಸ್ಥಾಪಿತಗೊಂಡಿದೆ. ಬೋಯಿಂಗ್ ೭೩೭ ಮತ್ತು ಏರ್ಬಸ್ ಎ ೩೨೦ ನಂತಹ ದೊಡ್ಡ ವಿಮಾನದ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸುತಿದೆ.

ಅಂತಾರಾಷ್ಟ್ರೀಯ ವಿಮಾನಗಳ ಅಗತ್ಯತೆಗಳನ್ನು ಸರಿಹೊಂದಿಸಲು ಇತ್ತೀಚೆಗೆ ಹಬ್ಬಳ್ಳಿಯ ವಿಮಾನನಿಲ್ದಾಣವನ್ನು ನವೀಕರಿಸಲಾಗಿಧೆ. ಉತ್ತರ ಕರ್ನಾಟಕದ ಜನರಿಗೆ ದೀರ್ಘಾವಧಿಯ ಅಂತರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವನ್ನು ಹೊಂದಲು ಇದು ದೀರ್ಘಾವಧಿ ಬೇಡಿಕೆಯಾಗಿತ್ತು. ಏರ್ಬಸ್ ವಿಮಾನವೂ ಸಹ ಇಲ್ಲಿಂದ ಕಾರ್ಯನಿರ್ವಹಿಸುತಿದ್ದು. ಹೊಸದಾಗಿ 3,600 ಚದರ ಮೀಟರ್ ಟರ್ಮಿನಲ್ ಅನ್ನು ಕೇಂದ್ರೀಯ ಹವಾನಿಯಂತ್ರಿತವಾದ ವಿಮಾನ ನಿಲ್ದಾಣವು, ಒಂದು ಘಂಟೆಯ ಸಮಯದಲ್ಲಿ ೩೦೦ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ವಿಮಾನ ಮೂಲಗಳು ತಿಳಿಸಿವೆ. ಮುಂಬರುವ ದಿನಗಳ್ಲಲಿ ವಿಮಾನನಿಲ್ದಾಣವು ಇನ್ನೂ ಹೆಚ್ಚಿನ ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿಲಿದೆ.

ಈ ವಿಮಾನ ನಿಲ್ದಾಣವು ಗೋಕುಲ್ ರಸ್ತೆಯಲ್ಲಿದೆ ಮತ್ತು ಹುಬ್ಬಳ್ಳೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 4 ಕ್ಕೆ ಸಮೀಪದಲ್ಲಿದೆ.

ರೈಲಿನ ಮೂಲಕ

ಧಾರವಾಡ ರೈಲ್ವೇ ನಿಲ್ದಾಣವು ಭಾರತ ರೈಲ್ವೆಯ ದಕ್ಷಿಣ ಪಶ್ಚಿಮ ರೈಲ್ವೆ ವಲಯ ಹುಬ್ಬಳ್ಳಿ ರೈಲ್ವೆ ವಿಭಾಗದ ಅಡಿಯಲ್ಲಿ ಒಂದು ಪ್ರಮುಖ ಕೇಂದ್ರವಾಗಿದ್ದು. ಧಾರವಾಡ ರೈಲು ನಿಲ್ದಾಣವು ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು, ಮುಂಬೈ, ಪುಣೆ, ಗದಗ, ಬಾಗಲಕೋಟೆ, ಬಿಜಾಪುರ, ಸೋಲಾಪುರ, ಬಳ್ಳಾರಿ, ದಾವಣಗೆರೆ, ದೆಹಲಿ, ವಿಶಾಖಪಟ್ಟಣಂ ಹೈದರಾಬಾದ್, ಅಹಮದಾಬಾದ್, ವಿಜಯವಾಡ, ಮೈಸೂರು ಮತ್ತು ತಿರುಪತಿಗಳಿಗೆ ಸಂಪರ್ಕ ಹೊಂದಿದೆ.

ಹತ್ತಿರದ ಪರ್ಯಾಯ ರೈಲು ನಿಲ್ದಾಣವೆಂದರೆ ಹುಬ್ಬಳ್ಳಿ ಜಂಕ್ಷನ್. ಹುಬ್ಬಳ್ಳಿ ಜಂಕ್ಷನ್ ಸಾರ್ವಜನಿಕರ ಪ್ರಯಾಣ ಮತ್ತು ವಾಣಿಜ್ಯ ಮಾರ್ಗವಾಗಿದೆ.ಕರ್ನಾಟಕದ ವಾಯುವ್ಯ ಧಿಕ್ಕಿನಲಿ ಮುಂಬೈಗೆ(460 ಕಿಲೋಮೀಟರ್ (290 ಮೈಲಿ)) ಸಂಪರ್ಕಿಸಬಹುದು, ಪಶ್ಚಿಮಕ್ಕೆ ಗೋವಾ (160 ಕಿಲೋಮೀಟರ್ (ಮೈಲಿ)), ದಕ್ಷಿಣದಿಂಧ ಬೆಂಗಳೂರಿಗೆ (410 ಕಿಲೋಮೀಟರ್ (ಮೈಲಿ)),ಪೂರ್ವದಿಂದ ಹೈದರಾಬಾದ್ಗೆ 450 ಕಿಲೋಮೀಟರ್ (280 ಮೈಲುಗಳು) ದೂರದಲ್ಲಿದೆ. ಇದು ಬೆಂಗಳೂರು ನಗರದ ನಂತರ ಕರ್ನಾಟಕದಲ್ಲಿ ಅತ್ಯಂತ ಬಿಡುವಿಲ್ಲದ ರೈಲು ನಿಲ್ದಾಣವಾಗಿದೆ.

ರಸ್ತೆಯ ಮೂಲಕ

ಧಾರವಾಡದಲ್ಲಿ ಎರಡು ಬಸ್ ನಿಲ್ದಾಣಗಳಿದ್ದು, ಒಂದು ಹಳೆ ಬಸ್ ನಿಲ್ದಾಣ ಮತ್ತೊಂಧು ಹೊಸ ಬಸ್ ನಿಲ್ದಾಣ. ಹಳೆ ಬಸ್ ನಿಲ್ದಾಣವು ಧಾರವಾಡ ನಗರದ ಮಧ್ಯದಲಿಧೆ, ಅಲ್ಲಿಂಧ ಹೊಸ ಬಸ್ ನಿಲ್ದಾಣಕ್ಕೆ ಬಸ್ ಸೌಲಬ್ಯವಿಧೇ. ಹೊಸ ಬಸ್ ನಿಲ್ದಾಣವು ಧಾರವಾಡದ ಬೆಳಗಾವಿ ರಸ್ತೆಯಲ್ಲಿ ಇದೆ. ಧಾರವಾಡದ ಹಳೆ ಬಸ್ ನಿಲ್ದಾಣವನ್ನು ಹೊಸ ರೀತಿಯಲ್ಲಿ ನವೀಕರಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಈ ನಿಲ್ದಾಣದಿಂದ್ ಜಿಲ್ಲೆಯ ವಿವಿದೆಡೆಗೆ ಬಸ್ ಸೇವೆಯನ್ನು ಕಲ್ಪಿಸಲಾಗುವುದು.

ಧಾರವಾಡ ಮಾತು ಹುಬ್ಬಳ್ಳಿ ಅವಳಿ ನಗರಗಳಾಗಿದ್ದು, ದಿನನಿತ್ಯ ನೂರಾರು ಬಸ್ಗಳು ಓಡಾಡುತ್ತವೇ. ಮುಂಬರುವ ದಿನಗಲಿ ಬಿ.ಆರ್.ಟಿ.ಸ್ ಬಸ್ ಸೌಲಬ್ಯವು ಬರಲಿದ್ದು. ಗುಜರಾತಿನ ಅಹಮದಾಬಾದ್ ನಗರದಲ್ಲಿ ಸ್ಥಾಪಿಸಿರುವ ಬಿ.ಆರ್.ಟಿ.ಸ್ ಬಸ್ ಸೌಲಬ್ಯವನ್ನು ಮಾದರಿಯಾಗಿ ಬಳಸಿ ನಿರ್ಮಿಸಲಾಗುತ್ತಿದೆ.

ಬೆಂಗಳೂರಿನಿಂದ ಧಾರವಾಡಕ್ಕೆ ರಸ್ತೆ ಪ್ರಯಾಣವು 410 ಕಿ.ಮೀ ಇದ್ದು, ಮುಂಬೈನಿಂದ 580 ಕಿಲೋಮೀಟರ್ ದೂರವಿದೆ. ಪುಣೆನಿಂದ 430 ಕಿ.ಮೀ. ದೊರದಲಿದೆ. ಹಲವಾರು ಖಾಸಗಿ ಬಸ್ಸುಗಳು ಧಾರವಾಡದಿಂದಬೆಂಗಳೂರಿಗೆ ಮತ್ತು ಮುಂಬೈಇಂದ್ ಹುಬ್ಬಳ್ಳಿಯವರೆಗೆ ಇವೆ. ರಾಜ್ಯ ಸಾರಿಗೆ ಸಂಸ್ಥೆಯು ಹುಬ್ಬಳ್ಳಿಯನ್ನು ವಾಯುವ್ಯ ವಿಭಾಗಿಯ ಮುಖ್ಯ ಆಡಳಿತ ಕಛೇರಿಯನ್ನಾಗಿ ಮಾಡಿದೆ. ಹೀಗಾಗಿ ಇಲ್ಲಿಂಧ ಹೈದರಾಬಾದ್, ಮುಂಬೈ, ಗೋವಾ, ಚೆನ್ನೈ, ಮುಂತಾದ ನಗರಗಳಿಂದ್ ಬಸ್ ಸೌಲಭ್ಯವಿದೆ.