ಮುಚ್ಚಿ

ಸಂಸ್ಕೃತಿ ಮತ್ತು ಪರಂಪರೆ

ಭಾರತದ ತ್ರಿವರ್ಣ ಧ್ವಜ ತಯಾರಿಕೆ

ಭಾರತದ ತ್ರಿವರ್ಣ ಧ್ವಜ ತಯಾರಿಕೆ ಗರಗ:

ಗರಗ ಧಾರವಾಡದಿಂದ 18 ಕಿ.ಮೀ ದೂರದಲ್ಲಿದೆ. ಭಾರತೀಯ ರಾಷ್ಟ್ರೀಯ ಧ್ವಜಗಳ ನೇಯ್ಗೆಗೆ ಇದು ಪ್ರಸಿದ್ಧ ಕೇಂದ್ರವಾಗಿದೆ. ಗರಗದ ಪವಾಡ ಪುರುಷ ಮಡಿವಾಳೇಶ್ವರ ಮಠ ಉತ್ತರ ಕರ್ನಾಟಕದ ಪ್ರಮುಖ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಮಠವು ಆಕರ್ಷಣೀಯವಾಗಿದ್ದು ಅನ್ನದಾಸೋಹ ಪ್ರತಿನಿತ್ಯ ನಡೆಯುತ್ತದೆ. ಭಕ್ತರಿಗೆ ತಂಗಿಕೊಳ್ಳಲು ವಿಶ್ರಾಂತಿ ಕೊಠಡಿಗಳಿವೆ. ಸಾಮಾಜಿಕ ಕ್ರಾಂತಿಯಲ್ಲಿ ತನ್ನ ಅಸ್ತಿತ್ವವನ್ನು ಇಂದಿನವರೆಗೂ ಕಾಪಾಡಿಕೊಂಡು ಬಂದಿರುವ ದೇಸಾಯಿ ವಾಡೆ ಮಠದಿಂದ ಕೂಗಳತೆಯಲ್ಲಿದೆ. ಗ್ರಾಮದ ಹೊರವಲಯದಲ್ಲಿ ರಾಷ್ಟ್ರೋತ್ಥಾನ ವಸತಿ ಶಾಲೆಯ ಕಟ್ಟಡ ಗಮನ ಸೆಳೆಯುತ್ತದೆ. ಇಲ್ಲಿಯೇ ಟಾಟಾ ಕಂಪನಿಯ ಟೆಲ್ಕೋ ಹಾಗೂ ಮಾರ್ಕೊಪೋಲೋ ಕಾರ್ಖಾನೆಗಳಿವೆ. ಸಮೀಪದಲ್ಲಿಯೇ ಧಾರವಾಡ ಹೈಕೋರ್ಟ್ ಕಾಣಬಹುದು.

ಡಾ. ಗಂಗೂಬಾಯಿ ಹಾನಗಲ್ ಗುರುಕುಲ್

ಸಂಗೀತ ಶಾಲೆ:

ಡಾ. ಗಂಗೂಬಾಯಿ ಹಾನಗಲ್ ಗುರುಕುಲ್ ಅನ್ನು ಕರ್ನಾಟಕ ಸರ್ಕಾರವು ಪ್ರಸಿದ್ಧ ಸಂಗೀತಗಾರನಾದ ಪದ್ಮವಿಭುಷಾನ್ ಡಾ. ಗಂಗೂಬಾಯಿ ಹಾನಗಲ್ ಅವರ ನೆನಪಿಗಾಗಿ ಸ್ಥಾಪಿಸಿದೆ. ಹಿಂದೂಸ್ಥಾನಿ ಸಂಗೀತದಲ್ಲಿ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ವೃತ್ತಿಪರ ತರಬೇತಿಯನ್ನು ನೀಡುವ ಮಹತ್ವಾಕಾಂಕ್ಷೆಯ ಆಸೆಯನ್ನು ಯುವ ಪ್ರತಿಭಾನ್ವಿತ ಕಲಾವಿದರಿಗೆ ಕಲಿಸಲು ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ತಮ್ಮ ಪ್ರತಿಭೆಯನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದ್ದರು . ಇದು ಯಾವುದೇ ಶಿಸ್ತು ಮತ್ತು ಕಟ್ಟುನಿಟ್ಟಿನ ಪಠ್ಯಕ್ರಮವಿಲ್ಲದೆಯೇ ಗುರು-ಶಿಷ್ಯ ಪರಂಪರೆಯ ಮೇಲೆ ರೂಪಿಸಲ್ಪಟ್ಟಿದೆ. ಗುರುಕುಲ್ ಅನ್ನು 6 ಗುರುಗಳು ಮತ್ತು 36 ವಿದ್ಯಾರ್ಥಿಗಳಿಗೆ ಸ್ಥಳಾವಕಾಶಕ್ಕಾಗಿ ಎಲ್ಲಾ ಸೌಲಭ್ಯಗಳೊಂದಿಗೆ ಸ್ಥಾಪಿಸಲಾಗಿದೆ ಮತ್ತು ಇದನ್ನು ಕರ್ನಾಟಕ ಸರ್ಕಾರ ರಚಿಸಿದ ಟ್ರಸ್ಟ್ ಸಮಿತಿಯಿಂದ ಆಡಳಿತ ಮಾಡಲಾಗುತ್ತದೆ.

ಧಾರವಾಡ ಪೇಡಾ

ಧಾರವಾಡ ಪೇಡಾ:

ವಿಶಿಷ್ಟವಾದ ಸಿಹಿ ಪದಾರ್ಥ ಪೇಡೆಯನ್ನು ಮೊಟ್ಟಮೊದಲ ಬಾರಿಗೆ ಪರಿಚಯಿಸಿದವರು ಧಾರವಾಡದ ಬಾಬುಸಿಂಗ್ ಠಾಕೂರರವರು. ಈ ಪೇಡಾ ಪದಾರ್ಥವನ್ನು ತಯಾರಿಸಿದ್ದಕ್ಕಾಗಿ ಬ್ರಿಟಿಷ್ ಸರಕಾರದಿಂದ ಮೆಚ್ಚುಗೆ ಗಳಿಸಿ ಅನೇಕ ಪುರಸ್ಕಾರಗಳನ್ನು ಪಡೆದರು. ಅಂದಿನಿಂದ ಇಂದಿನವರೆಗೂ ದೇಶಾದ್ಯಂತ ಈ ಪೇಡಾ ಪದಾರ್ಥವು ಬಹಳೇ ಅಚ್ಚುಮೆಚ್ಚಿನ ಸಿಹಿ ತಿನಿಸುವಾಗಿದೆ. ಹಬ್ಬ ಹರಿದಿನಗಳಲ್ಲಿ, ಇನ್ನಿತರ ಖುಷಿ ದಿನಗಳಲ್ಲಿ ಚಿಕ್ಕವರಿಂದ ಹಿಡಿದು ಹಿರಿಯರವರೆಗೂ ಈ ಪೇಡಾ ಪದಾರ್ಥವನ್ನು ಸಂಭ್ರಮಿಸುತ್ತಾರೆ. ಆಕಳ ಹಾಲನ್ನು ಅಗತ್ಯ ಪ್ರಮಾಣದಲ್ಲಿ ಕುದಿಸಿ ಅದರಿಂದ ಖವಾ ತಯಾರಿಸಿ ಅದಕ್ಕೆ ವಿಶಿಷ್ಟ ಪದಾರ್ಥಗಳನ್ನು ಸೇರ್ಪಡಿಸಿ ಪೇಡೆಯನ್ನು ತಯಾರಿಸಲಾಗುತ್ತದೆ.