ಮುಚ್ಚಿ

ಬಿಲ್ ಪಾವತಿಸಿ

     ನಾಗರಿಕರು ಕರ್ನಾಟಕ-ಒನ್ ನಾಗರಿಕ ಸೇವಾ ಕೇಂದ್ರಗಳಲ್ಲಿ ಅಥವಾ ಕೆಳಗೆ ನಮೂದಿಸಿದ ವೆಬ್‌ಸೈಟ್‌ನಲ್ಲಿ ಬಿಲ್‌ಗಳನ್ನು ಪಾವತಿಸಬಹುದು. ಕರ್ನಾಟಕ-ಒನ್ ಯೋಜನೆಯು ಅನೇಕ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಕಂಪನಿಗಳ ಸೇವೆಗಳನ್ನು ಒಂದೇ ಸೂರಿನಡಿ ನಾಗರಿಕ ಸ್ನೇಹಿ ರೀತಿಯಲ್ಲಿ ಒದಗಿಸುತ್ತದೆ. ಕರ್ನಾಟಕ ಒನ್ ಯೋಜನೆಯ ದೂರದೃಷ್ಟಿಯು ಒಂದೇ ವೇದಿಕೆಯಡಿ ವಿವಿಧ ಸರ್ಕಾರಿ ಹಾಗೂ ಖಾಸಗಿ ಸೇವೆಗಳನ್ನು, ಮಾಹಿತಿ ತಂತ್ರಜ್ಙಾನ ಉಪಕರಣಗಳನ್ನು ಬಳಸಿ, ವಿವಿಧ ವಿತರಣಾ ವಾಹಿನಿಗಳ ಮೂಲಕ, ಯಾವಾಗಲಾದರೂ, ಎಲ್ಲಿಯಾದರೂ ಸೇವೆಗಳನ್ನು ಲಭಿಸುವಂತೆ ಮಾಡುವುದರ ಜೊತೆಗೆ ಸಮಗ್ರ, ಅನುಕೂಲಕರ, ನ್ಯಾಯೋಚಿತ, ಪರಿಣಾಮಕಾರಿ, ಸುರಕ್ಷಿತ, ಸಮರ್ಥನೀಯ ಹಾಗೂ ನಾಗರಿಕ ಸ್ನೇಹಿ ರೀತಿಯಲ್ಲಿ ಸೇವೆ ಒದಗಿಸುವ ಆಕಾಂಕ್ಷೆಯನ್ನು ಹೊಂದಿರುತ್ತದೆ.

ಯೋಜನೆಯ ಉದ್ದೇಶಗಳು:

  • ವಿವಿಧ ಸರ್ಕಾರಿ ಹಾಗೂ ಖಾಸಗಿ ಸೇವೆಗಳನ್ನು ಒಂದೇ ಸೂರಿನಡಿ ನಾಗರಿಕ ಸ್ನೇಹಿ ರೀತಿಯಲ್ಲಿ ನೀಡುವುದು.
  • ನಾಗರಿಕರ ಅಗತ್ಯ ಅನುಸಾರ ಹೊಣೆಗಾರಿಕೆ, ಪಾರದರ್ಶಕತೆ, ಜವಾಬ್ದಾರಿತನ ವೃದ್ದಿಸುವುದು.
  • ವಿವಿಧ ಸರ್ಕಾರಿ ಇಲಾಖೆಗಳಿಗೆ ಪರಿಣಾಮಕಾರಿ ವೆಚ್ಚದಲ್ಲಿ ಸೇವೆ ಒದಗಿಸುವತಂಹ ಒಂದು ವೇದಿಕೆಯನ್ನು ನೀಡುವುದು.
  • ವಿವಿಧ ಸರ್ಕಾರಿ ಇಲಾಖೆಗಳಿಗೆ ದಕ್ಷತೆಯುಳ್ಳ ಆನ್ ಲೈನ್ ಎಂ.ಐ.ಎಸ್ ಹಾಗೂ ಇ.ಐ.ಎಸ್ ಒದಗಿಸುವುದು.
  • ವಿವಿಧ ಸರ್ಕಾರಿ ಇಲಾಖೆಗಳು ತಮ್ಮ ಮುಖ್ಯ ಕಾರ್ಯಗಳಲ್ಲಿ ಕೇಂದ್ರೀಕರಿಸಲು ಅನುಕೂಲ ಮಾಡುವುದು.

ಕರ್ನಾಟಕಒನ್ ಯೋಜನೆಯ ವೈಶಿಷ್ಟ್ಯತೆಗಳು

  1. ವಿವಿಧ ಸರ್ಕಾರಿ ಹಾಗೂ ಖಾಸಗಿ ಸೇವೆಗಳನ್ನು ಒಂದೇ ಸೂರಿನಡಿ ನೀಡಲಾಗುತ್ತಿದೆ.
  2. ಸೇವೆಗಳನ್ನು ಬೆಳಿಗ್ಗೆ 08 ರಿಂದ ಸಂಜೆ 07.00 ರವರೆಗೆ ವರ್ಷದ ಎಲ್ಲಾ ದಿನಗಳು ನೀಡಲಾಗುತ್ತದೆ (ಕಾರ್ಮಿಕರ ದಿನಾಚರಣೆ, ಸ್ವತಂತ್ರ ದಿನಾಚರಣೆ, ಗಣರಾಜ್ಯೋತ್ಸವ, ಚುನಾವಣೆ ಮತ ಚಲಾಯಿಸುವ ದಿನ, ಗಾಂಧಿ ಜಯಂತಿ, ಮತ್ತು ಕನ್ನಡ ರಾಜ್ಯೋತ್ಸವ ಹೊರತುಪಡಿಸಿ).
  3. ಯಾವುದೇ ಕೇಂದ್ರದ ಯಾವುದೇ ಕೌಂಟರ್ಗಳಲ್ಲಿ ಎಲ್ಲಾ ಸೇವೆಗಳನ್ನು ನಾಗರಿಕರು ಪಡೆಯಬಹದು.
  4. ನಾಗರಿಕರು ನಗದು/ಚೆಕ್/ಡಿಡಿ/ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿಸಬಹುದಾಗಿದೆ.
  5. ಕರ್ನಾಟಕಒನ್ ಕೇಂದ್ರಗಳಲ್ಲಿ ಲಭ್ಯವಿರುವ ಸೇವೆಗಳನ್ನು ಸೇವಾವಾರು ನಿಗಧಿತ ಅವಧಿಯೊಳಗೆ ವಿತರಿಸಬೇಕೆಂದು ಕಡ್ಡಾಯಗೊಳಿಸಿರುವುದರಿಂದ ನಾಗರಿಕರು ಸರದಿ ಸಾಲುಗಳಲ್ಲಿ ವ್ಯಯಿಸುವ ವೇಳೆಯನ್ನು ಉಳಿಸಬಹುದಾಗಿದೆ.
  6. ನಾಗರಿಕ ಸ್ನೇಹಿ ಕೇಂದ್ರಗಳು: ಸಮಗ್ರ ನಾಗರಿಕ ಕೇಂದ್ರಗಳು ಹವಾ ನಿಯಂತ್ರಿತ ಕೇಂದ್ರಗಳಾಗಿದ್ದು ಕುಡಿಯುವ ನೀರು, ಟೆಲಿವಿಷನ್, ದಿನಪತ್ರಿಕೆಗಳು ಇತ್ಯಾದಿಗಳ ಸೌಲಭ್ಯಗಳನ್ನು ಹೊಂದಿರುತ್ತವೆ.
  7. ನಾಗರಿಕರು ಕೇಂದ್ರಗಳಲ್ಲಿ ವ್ಯಯಿಸಬಹುದಾದ ವೇಳೆಯ ನಿಯಂತ್ರಣಕ್ಕಾಗಿ ವಿದ್ಯುನ್ಮಾನ ಸಾಲು ನಿರ್ವಾಹಣಾ ಪದ್ಧತಿಯನ್ನು ಅಳವಡಿಸಲಾಗಿದೆ.
  8. ಕೇಂದ್ರಗಳಲ್ಲಿ ಲಭ್ಯವಿರುವ ಕೆಲವೇ ಸೇವೆಗಳನ್ನು ಹೊರತು ಪಡಿಸಿ ಬೇರೆ ಯಾವುದೇ ಸೇವೆಗೆ ನಾಗರಿಕರು ಸೇವಾ ಶುಲ್ಕವನ್ನು ಪಾವತಿಸಬೇಕಾಗಿರುವುದಿಲ್ಲ.
  9. ಕರ್ನಾಟಕ ಒನ್ ವೆಬ್ಸೈಟ್ ಮೂಲಕ ಆನ್ ಲೈನ್ ಸೇವೆಗಳನ್ನು ಒದಗಿಸಲಾಗುತ್ತಿದೆ.

ಭೇಟಿ: https://www.karnatakaone.gov.in/

ಕರ್ನಾಟಕ ಒನ್

ಕರ್ನಾಟಕ ಒನ್ ಗ್ಲಾಸ್ ಹೌಸ್ ಸೆಂಟರ್ ವಲಯ ಸಂಖ್ಯೆ 9 ಸುಜಾತಾ ಟಾಕೀಸ್ ಹತ್ತಿರ ಹುಬ್ಬಳ್ಳಿ - 580024 || ಕರ್ನಾಟಕ ಒಂದು ಕಲಾಭವನ ಕೇಂದ್ರ 1ನೇ ಮಹಡಿ ವಲಯ ಸಂಖ್ಯೆ-12 ಬೆಳಗಾವಿ ರಸ್ತೆ ಧಾರವಾಡ-580001
ಸ್ಥಳ : ಜಿಲ್ಲೆಯಾದ್ಯಂತ | ನಗರ : Hubli-Dharwad | ಪಿನ್ ಕೋಡ್ : 580001
ಇಮೇಲ್ : ONEHELPDESK[at]KARNATAKA[dot]GOV[dot]IN