ಶಂಭುಲಿಂಗೇಶ್ವರ ದೇವಸ್ಥಾನ ಕುಂದಗೋಳ
ಧಾರವಾಡದಿಂದ ೪೦ ಕಿ.ಮೀ. ಹಾಗೂ ಹುಬ್ಬಳ್ಳಿಯಿಂದ ೨೦ ಕಿ.ಮೀ. ದೂರದಲ್ಲಿರುವ ಕುಂದಗೋಳ ತಾಲೂಕು ಕೇಂದ್ರವಾಗಿದೆ. ಇಲ್ಲಿನ ಶಂಭುಲಿಂಗೇಶ್ವರ ದೇವಸ್ಥಾನ ಹಾಗೂ ಬ್ರಹ್ಮ ದೇವಾಲಯಗಳು ಪ್ರಮುಖ ಆಕರ್ಷಣಿಯ ಕೇಂದ್ರ ಬಿಂದುವಾಗಿದೆ. ತಾಲೂಕು ಕೇಂದ್ರದಿಂದ ೮ ಕಿ.ಮೀ. ಅಂತರದಲ್ಲಿರುವ ಕಮಡೊಳ್ಳಿ ಗ್ರಾಮದಲ್ಲಿನ ಪ್ರಾಚೀನ ರಾಮೇಶ್ವರ, ಬಸವಣ್ಣ, ಕಲ್ಮೇಶ್ವರ ಹಾಗೂ ಸಿದ್ದಲಿಂಗೇಶ್ವರ ದೇವಸ್ಥಾನಗಳು ಕೂಡಾ ಪ್ರಮುಖವಾಗಿವೆ. ರಾಮೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ನಕ್ಷತ್ರಾ ಕಾರದಲ್ಲಿ ಬೃಹತ್ತಾದ ಶಿವಲಿಂಗವಿದೆ. ಸಭಾಮಂಟಪದಲ್ಲಿ ರಾಮಲಕ್ಷ್ಮಣರ ೪.೫ ಅಡಿ ಎತ್ತರದ ಶಿಲ್ಪಗಳಿವೆ. ಕುಂದಗೋಳದ ಶಂಭುಲಿಂಗೇಶ್ವರ ದೇವಾಲಯ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಕುಂದಗೋಳ ಬಸ್ ನಿಲ್ದಾಣದಿಂದ ೧೦ ನಿಮಿಷ ನಡೆದರೆ ದೇವಾಲಯ ಆವರಣದಲ್ಲಿರಬಹುದು. ಇಲ್ಲಿನ ಏಕಕೂಟ ದೇವಾಲಯದ ಗೋಪುರವನ್ನು ಇತೀಚೆಗ ರಚಿಸಲಾಗಿದೆ.
ಶಂಭುಲಿಂಗೇಶ್ವರ ದೇವಸ್ಥಾನದ ನವರಂಗ ಮತ್ತು ಗರ್ಭಗುಡಿ ನೋಡಲು ಸುಂದರವಾಗಿದೆ. ಈ ದೇವಾಲಯದ ಆಕರ್ಷಣೀಯ ಅಂದರೆ ಮುಖಮಂಟಪ ದಲ್ಲಿರುವ ಕಂಬಗಳು. ಈ ಕಂಬಗಳು ಬಹಳೇ ಕಸೂರಿಯಿಂದ ಕೂಡಿ ನಯವಾದ ಮೇಲ್ಮ್ನೆಯನ್ನು ಹೊಂದಿದ್ದು, ಅಂದಿನ ಹೊಳಪನ್ನು ಇಂದಿಗೂ ಕಾಪಾಡಿಕೊಳ್ಳುತ್ತಾ ಬಂದಿದೆ. ನವರಂಗದ ಹೊರಗೆ ನಂದಿ ಆಸೀನನಾಗಿದ್ದಾನೆ. ಗರ್ಭಗುಡಿಯ ದ್ವಾರ ಆರು ತೋಳಿನದ್ದಾಗಿದ್ದು, ಇಕ್ಕಲಗಳಲ್ಲಿ ಕವಾಟುಗಳಿವೆ. ಒಂದು ಕವಾಟದಲ್ಲಿ ಆಕರ್ಷಕ ಗಣೇಶನ ಮೂರ್ತಿ ಇದ್ದರೆ ಇನ್ನೊಂದರಲ್ಲಿ ಪಾರ್ವತಿಯ ಮೂರ್ತಿ ಇದೆ.
ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ಬೃಹತ್ತಾಕಾರದ ಶಂಭುಲಿಂಗೇಶ್ವರ ದೇವಸ್ಥಾನ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿದೆಯೋ ಅಥವಾ ಹೊಯ್ಸಳರ ಕಾಲದಲ್ಲಿ ನಿರ್ಮಾಣ ಗೊಂಡಿತೋ ಎಂಬುದು ಕಂಡುಬಂದಿಲ್ಲ. ದೇವಾಲಯದ ಎಲ್ಲ ಕಡೆಯೂ ಹೊಯ್ಸಳ ಲಾಂಛನ ಸಿಂಹಗಳೇ ರಾರಾಜಿಸುತ್ತದೆ ಮುಖಮಂಟಪದ ಒಳಭಾಗದ ಛಾವಣಿಯ ಎಲ್ಲಲ್ಲಿಯೂ ಕಲ್ಯಾಣಿ ಚಾಲುಕ್ಯರ ಸಂಕೇತವಾದ ತಾವರೆಗಳ ಕೆತ್ತನೆ ಇದೆ.
ಫೋಟೋ ಗ್ಯಾಲರಿ
ತಲುಪುವ ಬಗೆ:
ವಿಮಾನದಲ್ಲಿ
ಹುಬ್ಬಳ್ಳಿಯ ವಿಮಾನ ನಿಲ್ದಾಣವೂ ೩೬೯ ಎಕರೆ ಪ್ರದೇಶವನ್ನು ಹೊಂದಿದ್ದು. ಒಂದು ರನ್ವೇ ಉದ್ದ ೧.೬೭೦ ಮೀಟರ ೦೮/೨೬ ಆಧಾರಿತ ಹೊಂದಿದೆ. ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದ, ಗೋಕುಲ್ ರಸ್ತೆಯಲ್ಲಿ ಸ್ಥಾಪಿತಗೊಂಡಿದೆ. ಬೋಯಿಂಗ್ ೭೩೭ ಮತ್ತು ಏರ್ಬಸ್ ಎ ೩೨೦ ನಂತಹ ದೊಡ್ಡ ವಿಮಾನದ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸುತಿದೆ.
ರೈಲಿನಿಂದ
ಹುಬ್ಬಳ್ಳಿ ರೈಲು ನಿಲ್ದಾಣದಿಂದ ಬೆಂಗಳೂರು ಕಡೆ ಹೋಗುವ ಎಲ್ಲ ರೈಲುಗಳು ಕುಂದಗೋಳ ಮೇಲೆ ಹಾದುಹೋಗುತ್ತವೆ. ಆದರೆ ಕೆಲವು ರೈಲುಗಳು ಮಾತ್ರ್ ನಿಲ್ಲುಗಡೆ ಹೊಂದಿವೆ. ಕರ್ನಾಟಕದ ವಾಯುವ್ಯ ಧಿಕ್ಕಿನಲಿ ಮುಂಬೈಗೆ(460 ಕಿಲೋಮೀಟರ್) ಸಂಪರ್ಕಿಸಬಹುದು, ಪಶ್ಚಿಮಕ್ಕೆ ಗೋವಾ (160 ಕಿಲೋಮೀಟರ್), ದಕ್ಷಿಣದಿಂಧ ಬೆಂಗಳೂರಿಗೆ (410 ಕಿಲೋಮೀಟರ್),ಪೂರ್ವದಿಂದ ಹೈದರಾಬಾದ್ಗೆ 450 ಕಿಲೋಮೀಟರ್ ದೂರದಲ್ಲಿದೆ. ಇದು ಬೆಂಗಳೂರು ನಗರದ ನಂತರ ಕರ್ನಾಟಕದಲ್ಲಿ ಅತ್ಯಂತ ಬಿಡುವಿಲ್ಲದ ರೈಲು ನಿಲ್ದಾಣವಾಗಿದೆ. ಹುಬ್ಬಳ್ಳಿ ರೈಲು ಜಂಕ್ಷನ್ ಸಾರ್ವಜನಿಕರ ಪ್ರಯಾಣ ಮತ್ತು ವಾಣಿಜ್ಯ ಮಾರ್ಗವಾಗಿದೆ.ಹುಬ್ಬಳ್ಳಿ ರೈಲು ನಿಲ್ದಾಣದಿಂದ ಹುಬ್ಬಳ್ಳಿ ಹಳೆ ಬಸ್ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಬೆಂಗಳೂರಿಗೆ ಹೋಗುವ ರಸ್ತೆ ಮಾರ್ಗವಾಗಿ ತಲುಪಬಹುದು.
ರಸ್ತೆ ಮೂಲಕ
ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣಕ್ಕೆ ಬಂದು ಇಳ್ಳಿದರೆ, ಅಲ್ಲಿಂದ ಲಕ್ಷ್ಮೇಶ್ವರ,ಕುಂಧಗೊಳ್ ಮಾರ್ಗವಾಗಿ ಹೋಗುವ ಎಲ್ಲ ಬಸ್ಸುಗಳು ಕುಂಧಗೊಳ್ ನಿಲ್ದಾಣ ಹೊಂದಿವೆ.