ಸಾಧನಕೇರಿ ಉದ್ಯಾನವನ ಧಾರವಾಡ
ಮಹಾನ್ ಕವಿ ಜ್ಞಾನಪೀಠ ಪುರಸ್ಕೃತ ಡಾ|| ದ.ರಾ. ಬೇಂದ್ರೆ ಗೌರವಿಸುವ ಉದ್ಯಾನವನ. ಧಾರವಾಡ ನಗರದಿಂದ ಗೋವಾ ಮಾರ್ಗವಾಗಿ ೩ ಕಿ.ಮೀ. ಅಂತರದಲ್ಲಿರುವ ಸಾಧನಕೇರಿಗೆ ಬಂದರೆ ಉದ್ಯಾನವನ ಕಾಣಬಹುದು. ಮೈಸೂರು ಆಫ್ ಝಿಯಾನ್ ಗಾರ್ಡನ್ಸ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಸಂಗೀತ ಕಾರಂಜಿ ನೋಡಲು ಮನಮೋಹಕವಾಗಿದ್ದು, ಹುಲ್ಲುಹಾಸುಗಳು, ಪ್ರತಿಮೆಗಳು ಮತ್ತು ಮಕ್ಕಳಿಂದ ಹಿಡಿದು ದೊಡ್ಡವರನ್ನು ಮನರಂಜಿಸುವ ಬೋಟಿಂಗ್ ವ್ಯವಸ್ಥೆ, ವಿವಿಧ ಆಟಗಳು, ಫುಡ್ ಕೋರ್ಟ್, ವಿಶ್ರಾಂತಿ ಗೃಹಗಳಿವೆ. ಸಾಧನಕೇರಿ ಉದ್ಯಾನವನ ಧಾರವಾಡದ ಸೌಂದರ್ಯ ಆಕರ್ಷಣೆಯ ಪ್ರತೀಕವಾಗಿದೆ
ಫೋಟೋ ಗ್ಯಾಲರಿ
ತಲುಪುವ ಬಗೆ:
ವಿಮಾನದಲ್ಲಿ
ಹುಬ್ಬಳ್ಳಿಯ ವಿಮಾನ ನಿಲ್ದಾಣವೂ ೩೬೯ ಎಕರೆ ಪ್ರದೇಶವನ್ನು ಹೊಂದಿದ್ದು. ಒಂದು ರನ್ವೇ ಉದ್ದ ೧.೬೭೦ ಮೀಟರ ೦೮/೨೬ ಆಧಾರಿತ ಹೊಂದಿದೆ. ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದ, ಗೋಕುಲ್ ರಸ್ತೆಯಲ್ಲಿ ಸ್ಥಾಪಿತಗೊಂಡಿದೆ. ಬೋಯಿಂಗ್ ೭೩೭ ಮತ್ತು ಏರ್ಬಸ್ ಎ ೩೨೦ ನಂತಹ ದೊಡ್ಡ ವಿಮಾನದ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸುತಿದೆ.
ರೈಲಿನಿಂದ
ಧಾರವಾಡ ರೈಲ್ವೇ ನಿಲ್ದಾಣವು ಭಾರತ ರೈಲ್ವೆಯ ದಕ್ಷಿಣ ಪಶ್ಚಿಮ ರೈಲ್ವೆ ವಲಯ ಹುಬ್ಬಳ್ಳಿ ರೈಲ್ವೆ ವಿಭಾಗದ ಅಡಿಯಲ್ಲಿ ಒಂದು ಪ್ರಮುಖ ಕೇಂದ್ರವಾಗಿದ್ದು. ಧಾರವಾಡ ರೈಲು ನಿಲ್ದಾಣವು ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು, ಮುಂಬೈ, ಪುಣೆ, ಗದಗ, ಬಾಗಲಕೋಟೆ, ಬಿಜಾಪುರ, ಸೋಲಾಪುರ, ಬಳ್ಳಾರಿ, ದಾವಣಗೆರೆ, ದೆಹಲಿ, ವಿಶಾಖಪಟ್ಟಣಂ ಹೈದರಾಬಾದ್, ಅಹಮದಾಬಾದ್, ವಿಜಯವಾಡ, ಮೈಸೂರು ಮತ್ತು ತಿರುಪತಿಗಳಿಗೆ ಸಂಪರ್ಕ ಹೊಂದಿದೆ.
ರಸ್ತೆ ಮೂಲಕ
ಧಾರವಾಡದಲ್ಲಿ ಎರಡು ಬಸ್ ನಿಲ್ದಾಣಗಳಿದ್ದು, ಒಂದು ಹಳೆ ಬಸ್ ನಿಲ್ದಾಣ ಮತ್ತೊಂಧು ಹೊಸ ಬಸ್ ನಿಲ್ದಾಣ. ಹಳೆ ಬಸ್ ನಿಲ್ದಾಣವು ಧಾರವಾಡ ನಗರದ ಮಧ್ಯದಲಿಧೆ, ಅಲ್ಲಿಂಧ ಹೊಸ ಬಸ್ ನಿಲ್ದಾಣಕ್ಕೆ ಬಸ್ ಸೌಲಬ್ಯವಿಧೇ. ಹೊಸ ಬಸ್ ನಿಲ್ದಾಣವು ಧಾರವಾಡದ ಬೆಳಗಾವಿ ರಸ್ತೆಯಲ್ಲಿ ಇದೆ. ಧಾರವಾಡದ ಹಳೆ ಬಸ್ ನಿಲ್ದಾಣವನ್ನು ಹೊಸ ರೀತಿಯಲ್ಲಿ ನವೀಕರಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಈ ನಿಲ್ದಾಣದಿಂದ್ ಜಿಲ್ಲೆಯ ವಿವಿದೆಡೆಗೆ ಬಸ್ ಸೇವೆಯನ್ನು ಕಲ್ಪಿಸಲಾಗುವುದು.