ಮುಚ್ಚಿ

ಚಂದ್ರಮೌಳೇಶ್ವರ ದೇವಸ್ಥಾನ

ವರ್ಗ ಐತಿಹಾಸಿಕ

ಕ್ರಿ.ಶ. 9 ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರಿಂದ ನಿರ್ಮಾಣವಾದ ದೇವಸ್ಥಾನ. ಈ ದೇವಾಲಯ ಇತರೆ ಶಿವ ದೇವಾಲಯಗಳಿಗಿಂತ ವಿಭಿನ್ನವಾಗಿದೆ. ಎರಡು ದೊಡ್ಡ ಶಿವಲಿಂಗಗಳನ್ನು ಹೊಂದಿದೆ. ಹುಬ್ಬಳ್ಳಿ ತಾಲೂಕಿನ ಉಣಕಲ್ ಗ್ರಾಮದಲ್ಲಿದೆ. ಚಂದ್ರಮೌಳೇಶ್ವರ ಶಿವನ ಮತ್ತೊಂದು ಹೆಸರು. ದೇವಾಲಯ ಕಪ್ಪು ಗ್ರಾನೈಟ್ ಸ್ತಂಭಗಳಿಂದ ಕೂಡಿದೆ. ವಾಸ್ತುಶೈಲಿಯ ಉತ್ತಮ ಉದಾಹರಣೆ. ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ.

ಫೋಟೋ ಗ್ಯಾಲರಿ

  • ಚಂದ್ರಮೌಳೇಶ್ವರ ದೇವಸ್ಥಾನ

ತಲುಪುವ ಬಗೆ:

ವಿಮಾನದಲ್ಲಿ

ಹುಬ್ಬಳ್ಳಿಯ ವಿಮಾನ ನಿಲ್ದಾಣವೂ ೩೬೯ ಎಕರೆ ಪ್ರದೇಶವನ್ನು ಹೊಂದಿದ್ದು. ಒಂದು ರನ್ವೇ ಉದ್ದ ೧.೬೭೦ ಮೀಟರ ೦೮/೨೬ ಆಧಾರಿತ ಹೊಂದಿದೆ. ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದ, ಗೋಕುಲ್ ರಸ್ತೆಯಲ್ಲಿ ಸ್ಥಾಪಿತಗೊಂಡಿದೆ. ಬೋಯಿಂಗ್ ೭೩೭ ಮತ್ತು ಏರ್ಬಸ್ ಎ ೩೨೦ ನಂತಹ ದೊಡ್ಡ ವಿಮಾನದ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸುತಿದೆ.

ರೈಲಿನಿಂದ

ಹುಬ್ಬಳ್ಳಿ ಜಂಕ್ಷನ್ ಸಾರ್ವಜನಿಕರ ಪ್ರಯಾಣ ಮತ್ತು ವಾಣಿಜ್ಯ ಮಾರ್ಗವಾಗಿದೆ.ಕರ್ನಾಟಕದ ವಾಯುವ್ಯ ಧಿಕ್ಕಿನಲಿ ಮುಂಬೈಗೆ(460 ಕಿಲೋಮೀಟರ್) ಸಂಪರ್ಕಿಸಬಹುದು, ಪಶ್ಚಿಮಕ್ಕೆ ಗೋವಾ (160 ಕಿಲೋಮೀಟರ್), ದಕ್ಷಿಣದಿಂಧ ಬೆಂಗಳೂರಿಗೆ (410 ಕಿಲೋಮೀಟರ್),ಪೂರ್ವದಿಂದ ಹೈದರಾಬಾದ್ಗೆ 450 ಕಿಲೋಮೀಟರ್ ದೂರದಲ್ಲಿದೆ. ಇದು ಬೆಂಗಳೂರು ನಗರದ ನಂತರ ಕರ್ನಾಟಕದಲ್ಲಿ ಅತ್ಯಂತ ಬಿಡುವಿಲ್ಲದ ರೈಲು ನಿಲ್ದಾಣವಾಗಿದೆ

ರಸ್ತೆ ಮೂಲಕ

ಹುಬ್ಬಳ್ಳಿ ನಗರದ ಉಣಕಲ್ ಗ್ರಾಮದಲ್ಲಿರುವ ಈ ದೇವಸ್ಥಾನಕ್ಕೆ ಹೂಗುವದಾದರೆ, ಸಾಯಿನಗರ್ ಮಾರ್ಗವಾಗಿ ಚಲಿಸುವ ಯಾವುದೇ ವಾಹನವನ್ನು ಹತ್ತಿ ಹೋಗಬಹುದು.