ಮುಚ್ಚಿ

ತಂಬೂರ ಬಸವಣ್ಣನ ದೇವಸ್ಥಾನ, ಕಲಘಟಗಿ

ವರ್ಗ ಐತಿಹಾಸಿಕ, ಧಾರ್ಮಿಕ

ತಂಬೂರ ಗ್ರಾಮವು ಕಲಘಟಗಿಯಿಂದ ಯಲ್ಲಾಪೂರ ಮಾರ್ಗವಾಗಿ ೧೦ ಕಿ.ಮೀ. ಕ್ರಮಿಸಿದರೆ ಬಲಭಾಗಕ್ಕೆ ಸಿಗುವದೇ ತಂಬೂರ ಗ್ರಾಮ. ಅಮರಶಿಲ್ಪಿ ಜಕಣಾಚಾರ್ಯ ನಿರ್ಮಿಸಿದ ಶಿವ ದೇವಾಲಯ ತಂಬೂರ ಗ್ರಾಮದ ಆಕರ್ಷಕ ತಾಣ. ಇಲ್ಲಿನ ಶಿವ ದೇವಾಲಯ ತಂಬೂರ ಬಸವಣ್ಣನ ದೇಗುಲವೆಂದೇ ಪ್ರಖ್ಯಾತಗೊಂಡಿದೆ. ದೇವಾಲಯದ ಪ್ರವೇಶ ದ್ವಾರದಲ್ಲಿ ಆಕರ್ಷಕ ನವರಂಗ ಹಾಗೂ ಗರ್ಭಗುಡಿ ಇದ್ದು, ಹೆಣ್ಣು ದೇವತೆಯ ವಿಗ್ರಹವಿದೆ. ಪ್ರವೇಶ ದ್ವಾರದಲ್ಲಿ ವಿಘ್ನೇಶನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ನವರಂಗದಲ್ಲಿ ಬೃಹತ್ತಾಕಾರದ ಬಸವಣ್ಣನ ಮೂರ್ತಿವಿದ್ದು, ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಚಾಲುಕ್ಯರ ಕಾಲದಲ್ಲಿ ಈ ದೇವಾಲಯ ನಿರ್ಮಾಣಗೊಂಡಿತೆಂದು ಇತಿಹಾಸ ಹೇಳುತ್ತದೆ. ಕಲಘಟಗಿ ತಾಲೂಕು ಧಾರವಾಡದಿಂದ ೩೫ ಕಿ.ಮೀ. ಹಾಗೂ ಹುಬ್ಬಳ್ಳಿಯಿಂದ ೨೫ ಕಿ.ಮೀ. ದೂರದಲ್ಲಿರುವ ಕಲಘಟಗಿ ತಾಲೂಕು ಕೇಂದ್ರವಾಗಿದ್ದು, ಚಿತ್ತಾಕರ್ಷಕ ಮರದ ತೊಟ್ಟಿಲು ಹಾಗೂ ಮೂರ್ತಿಗಳ ತಯಾರಿಕೆಗೆ ಖ್ಯಾತಿ ಪಡೆದಿದೆ. ಇಲ್ಲಿ ಎರಡು ಜೈನ ಬಸದಿಗಳಿವೆ. ಪದ್ಮಾಸೀನ ಶಾಂತಿನಾಥ ತೀರ್ಥಂಕರರು ಕಾಯಸ್ತಭಂಗಿಯಲ್ಲಿ ನಿಂತ ಪಾರ್ಶ್ವನಾಥ ಮೂರ್ತಿ ಆಕರ್ಷಕವಾಗಿದ್ದು, ಕಲ್ಯಾಣ ಚಾಲುಕ್ಯರ ಕಾಲದ್ದೆಂದು ಗುರುತಿಸಲಾಗಿದೆ.

ಫೋಟೋ ಗ್ಯಾಲರಿ

  • ಶ್ರೀ ತಂಬೂರ್ ಬಸವಣ್ಣ ದೇವಸ್ಥಾನ

ತಲುಪುವ ಬಗೆ:

ವಿಮಾನದಲ್ಲಿ

ಹುಬ್ಬಳ್ಳಿಯ ವಿಮಾನ ನಿಲ್ದಾಣವೂ ೩೬೯ ಎಕರೆ ಪ್ರದೇಶವನ್ನು ಹೊಂದಿದ್ದು. ಒಂದು ರನ್ವೇ ಉದ್ದ ೧.೬೭೦ ಮೀಟರ ೦೮/೨೬ ಆಧಾರಿತ ಹೊಂದಿದೆ. ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದ, ಗೋಕುಲ್ ರಸ್ತೆಯಲ್ಲಿ ಸ್ಥಾಪಿತಗೊಂಡಿದೆ. ಬೋಯಿಂಗ್ ೭೩೭ ಮತ್ತು ಏರ್ಬಸ್ ಎ ೩೨೦ ನಂತಹ ದೊಡ್ಡ ವಿಮಾನದ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸುತಿದೆ.

ರೈಲಿನಿಂದ

ಧಾರವಾಡ ರೈಲ್ವೇ ನಿಲ್ದಾಣವು ಭಾರತ ರೈಲ್ವೆಯ ದಕ್ಷಿಣ ಪಶ್ಚಿಮ ರೈಲ್ವೆ ವಲಯ ಹುಬ್ಬಳ್ಳಿ ರೈಲ್ವೆ ವಿಭಾಗದ ಅಡಿಯಲ್ಲಿ ಒಂದು ಪ್ರಮುಖ ಕೇಂದ್ರವಾಗಿದ್ದು. ಧಾರವಾಡ ರೈಲು ನಿಲ್ದಾಣವು ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು, ಮುಂಬೈ, ಪುಣೆ, ಗದಗ, ಬಾಗಲಕೋಟೆ, ಬಿಜಾಪುರ, ಸೋಲಾಪುರ, ಬಳ್ಳಾರಿ, ದಾವಣಗೆರೆ, ದೆಹಲಿ, ವಿಶಾಖಪಟ್ಟಣಂ ಹೈದರಾಬಾದ್, ಅಹಮದಾಬಾದ್, ವಿಜಯವಾಡ, ಮೈಸೂರು ಮತ್ತು ತಿರುಪತಿಗಳಿಗೆ ಸಂಪರ್ಕ ಹೊಂದಿದೆ.

ರಸ್ತೆ ಮೂಲಕ

ಧಾರವಾಡದಲ್ಲಿ ಎರಡು ಬಸ್ ನಿಲ್ದಾಣಗಳಿದ್ದು, ಒಂದು ಹಳೆ ಬಸ್ ನಿಲ್ದಾಣ ಮತ್ತೊಂಧು ಹೊಸ ಬಸ್ ನಿಲ್ದಾಣ. ಹಳೆ ಬಸ್ ನಿಲ್ದಾಣವು ಧಾರವಾಡ ನಗರದ ಮಧ್ಯದಲಿಧೆ, ಅಲ್ಲಿಂಧ ಹೊಸ ಬಸ್ ನಿಲ್ದಾಣಕ್ಕೆ ಬಸ್ ಸೌಲಬ್ಯವಿಧೇ. ಹೊಸ ಬಸ್ ನಿಲ್ದಾಣವು ಧಾರವಾಡದ ಬೆಳಗಾವಿ ರಸ್ತೆಯಲ್ಲಿ ಇದೆ. ಧಾರವಾಡದ ಹಳೆ ಬಸ್ ನಿಲ್ದಾಣವನ್ನು ಹೊಸ ರೀತಿಯಲ್ಲಿ ನವೀಕರಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಈ ನಿಲ್ದಾಣದಿಂದ್ ಜಿಲ್ಲೆಯ ವಿವಿದೆಡೆಗೆ ಬಸ್ ಸೇವೆಯನ್ನು ಕಲ್ಪಿಸಲಾಗುವುದು.