ಮುಚ್ಚಿ

ನವಲಗುಂದ ತಾಲೂಕಿನ ಅಣ್ಣಿಗೇರಿಯ ಅಮೃತೇಶ್ವರ ದೇವಸ್ಥಾನ

ವರ್ಗ ಐತಿಹಾಸಿಕ, ಧಾರ್ಮಿಕ

ಚಾಲುಕ್ಯ ದೊರೆ (೧೦೫೦) ಒಂದನೇ ಸೋಮೇಶ್ವರನ ಕಾಲದಲ್ಲಿ ನಿರ್ಮಾಣಗೊಂಡಿತು. ಹುಬ್ಬಳ್ಳಿ-ಗದಗ ರಸ್ತೆಯಲ್ಲಿ ಹುಬ್ಬಳ್ಳಿಯಿಂದ ೩೫ ಕಿ.ಮೀ. ದೂರದಲ್ಲಿದೆ. ಆದಿಕವಿ ಪಂಪ (೯೦೨) ಹುಟ್ಟಿದ ಸ್ಥಳ ಅಣ್ಣಿಗೇರಿ. ನಾಲ್ಕನೇಯ ಸೋಮೇಶ್ವರನ ರಾಜಧಾನಿಯಾಗಿ ಮತ್ತು ಹೊಯ್ಸಳ ದೊರೆ ವೀರ ಬಲ್ಲಾಳನ ಉಪರಾಜಧಾನಿಯಾಗಿಯೂ ಹಾಗೂ ದಕ್ಷಿಣದ ವಾರಾಣಾಸಿಯಾಗಿ ಅಣ್ಣಿಗೇರಿ ಪ್ರಸಿದ್ಧಿ ಪಡೆದಿತ್ತು. ಅಣ್ಣಿಗೇರಿಯಲ್ಲಿನ ಅಮೃತೇಶ್ವರ ದೇವಸ್ಥಾನ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಕಲ್ಯಾಣಿ ಚಾಲುಕ್ಯರ ಶೈಲಿಯ ದೇವಸ್ಥಾನವಾಗಿದೆ. ೭೬ ಕಂಬಗಳ ಗರ್ಭಗೃಹ ಅಂತರಾಳ, ನವರಂಗ, ಸಭಾಮಂಟಪ ಮತ್ತು ಗಜಲಕ್ಷ್ಮಿ ಶಿಲ್ಪಗಳನ್ನು ಒಳಗೊಂಡಿರುವ ಈ ದೇವಸ್ಥಾನ ಪ್ರವಾಸಿ ಕೇಂದ್ರಗಳಲ್ಲಿ ಒಂದಾಗಿದೆ. ಅಣ್ಣಿಗೇರಿಯು ರಾಜ-ಮಹಾರಾಜರ ಕಾಲದಿಂದಲೂ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಇಲ್ಲಿ ಪಾಶ್ವನಾರ್ಥ ಬಸದಿಯನ್ನು ರೈಲುಬೋಗಿಯಂತೆ ನಿರ್ಮಿಸಲಾಗಿದೆ. ಪ್ರತಿವರ್ಷ ಶಿವರಾತ್ರಿದಂದು ಜಾತ್ರಾ ಮಹೋತ್ಸವ ಜರಗುತ್ತದೆ.

ಫೋಟೋ ಗ್ಯಾಲರಿ

  • ಅಮೃತೇಶ್ವರ
  • ಅಮೃತೇಶ್ವರ ದೇವಸ್ಥಾನ

ತಲುಪುವ ಬಗೆ:

ವಿಮಾನದಲ್ಲಿ

ಹುಬ್ಬಳ್ಳಿಯ ವಿಮಾನ ನಿಲ್ದಾಣವೂ ೩೬೯ ಎಕರೆ ಪ್ರದೇಶವನ್ನು ಹೊಂದಿದ್ದು. ಒಂದು ರನ್ವೇ ಉದ್ದ ೧.೬೭೦ ಮೀಟರ ೦೮/೨೬ ಆಧಾರಿತ ಹೊಂದಿದೆ. ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದ, ಗೋಕುಲ್ ರಸ್ತೆಯಲ್ಲಿ ಸ್ಥಾಪಿತಗೊಂಡಿದೆ. ಬೋಯಿಂಗ್ ೭೩೭ ಮತ್ತು ಏರ್ಬಸ್ ಎ ೩೨೦ ನಂತಹ ದೊಡ್ಡ ವಿಮಾನದ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸುತಿದೆ.

ರೈಲಿನಿಂದ

ಹುಬ್ಬಳ್ಳಿ ರೈಲು ನಿಲ್ದಾಣದಿಂದ ವಿಜಯಪುರ ಮತ್ತು ಸೋಲಾಪುರ್ ಕಡೆ ಹೋಗುವ ಎಲ್ಲ ರೈಲುಗಳು ಅಣ್ಣಿಗೇರಿ ಮೇಲೆ ಹಾದುಹೋಗುತ್ತವೆ. ಆದರೆ ಕೆಲವು ರೈಲುಗಳು ಮಾತ್ರ್ ನಿಲ್ಲುಗಡೆ ಹೊಂದಿವೆ. ಕರ್ನಾಟಕದ ವಾಯುವ್ಯ ಧಿಕ್ಕಿನಲಿ ಮುಂಬೈಗೆ(460 ಕಿಲೋಮೀಟರ್ (290 ಮೈಲಿ)) ಸಂಪರ್ಕಿಸಬಹುದು, ಪಶ್ಚಿಮಕ್ಕೆ ಗೋವಾ (160 ಕಿಲೋಮೀಟರ್ (ಮೈಲಿ)), ದಕ್ಷಿಣದಿಂಧ ಬೆಂಗಳೂರಿಗೆ (410 ಕಿಲೋಮೀಟರ್ (ಮೈಲಿ)),ಪೂರ್ವದಿಂದ ಹೈದರಾಬಾದ್ಗೆ 450 ಕಿಲೋಮೀಟರ್ (280 ಮೈಲುಗಳು) ದೂರದಲ್ಲಿದೆ. ಇದು ಬೆಂಗಳೂರು ನಗರದ ನಂತರ ಕರ್ನಾಟಕದಲ್ಲಿ ಅತ್ಯಂತ ಬಿಡುವಿಲ್ಲದ ರೈಲು ನಿಲ್ದಾಣವಾಗಿದೆ. ಹುಬ್ಬಳ್ಳಿ ರೈಲು ಜಂಕ್ಷನ್ ಸಾರ್ವಜನಿಕರ ಪ್ರಯಾಣ ಮತ್ತು ವಾಣಿಜ್ಯ ಮಾರ್ಗವಾಗಿದೆ.ಹುಬ್ಬಳ್ಳಿ ರೈಲು ನಿಲ್ದಾಣದ ಹತ್ತಿರವಿರುವ ಗದಗ್ ರಸ್ತೆ ಮಾರ್ಗವಾಗಿ ಹೋಗಬಹುದು.

ರಸ್ತೆ ಮೂಲಕ

ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣಕ್ಕೆ ಬಂದು ಇಳ್ಳಿದರೆ, ಅಲ್ಲಿಂದ ಗದಗ್ ಮಾರ್ಗವಾಗಿ ಹೋಗುವ ಎಲ್ಲ ಬಸ್ಸುಗಳು ಅಣ್ಣಿಗೇರಿಗೆ ನಿಲ್ದಾಣ ಹೊಂದಿವೆ.