ಧಾರವಾಡ ಜಿಲ್ಲೆ ಮತ್ತು ಪಟ್ಟಣ ಕರ್ನಾಟಕ ರಾಜ್ಯದಲ್ಲಿ ಇದೆ ಮತ್ತು ಧಾರವಾಡ ಪುರಸಭೆ ಆಡಳಿತ ಕೇಂದ್ರದ ಜೊತೆಗೆ ಅನೇಕ ಶೈಕ್ಷಣಿಕ ಸಂಸ್ಥೆಗಳನ್ನು ಮತ್ತು ಕರ್ನಾಟಕ ವಿಶ್ವವಿದ್ಯಾಲಯವನ್ನು ಒಳಗೊಂಡಿದೆ. ಧಾರವಾಡ ಜಿಲ್ಲೆಯು ಮತ್ತಷ್ಟು 5 ತಾಲ್ಲೂಕುಗಳನ್ನಾಗಿ ವಿಂಗಡಿಸಲಾಗಿದೆ ಅವುಗಳೆಂದರೆ ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ, ನವಲಗುಂದ.
ಅವಳಿ ನಗರಗಳು ಸೇರಿ; ಹುಬ್ಬಳ್ಳಿ ಒಂದು ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರವಾಗಿದ್ದು ಮತ್ತು ಧಾರವಾಡ ಒಂದು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿದ್ದು, ಹು.ಧಾ.ಮಹಾನಗರ ಪಾಲಿಕೆ ಬೆಂಗಳೂರು ನಂತರ ಕರ್ನಾಟಕದ ಎರಡನೇ ದೊಡ್ಡ ಪುರಸಭೆ ಆಗಿದ್ದು 202,3 ಚದರ ಕಿಲೋಮೀಟರ್ನಷ್ಟು ವಿಸ್ತೀರ್ಣವನ್ನು 67 ವಾರ್ಡ್ ಅಥವಾ ಬ್ಲಾಕ್ಗಳನ್ನು ನಿರ್ವಹಿಸುತ್ತಿದೆ.
ಇತಿಹಾಸತಜ್ಞರ ಪ್ರಕಾರ “ಧಾರವಾಡ” ಪದದ ಅರ್ಥ ದೀರ್ಘ ಪ್ರಯಾಣ ನಂತರ ವಿಶ್ರಾಂತಿಸುವ ಸ್ಥಳ ಅಥವಾ ಒಂದು ಸಣ್ಣ ವಸತಿ. ಶತಮಾನಗಳಿಂದಲೂ, ಧಾರವಾಡ ಮಲೆನಾಡು ಮತ್ತು ಬಯಲು ಸೀಮೆಯ ನಡುವಿನ ಪ್ರವಾಸಿಗರಿಗೆ ಒಂದು ತಂಗುದಾಣವಾಗಿ ವರ್ತಿಸುತಿತ್ತು. ಧಾರವಾಡ ಪದವು ಸಂಸ್ಕೃತದ ‘ದ್ವಾರ’ದಿಂದ ‘ದಾರ’ ಮತ್ತು ‘ವಾಟ’ ದಿಂದ ‘ವಾಡ’ ಬಂದಿದೆ ಎನ್ನುತ್ತಾರೆ.