ಮುಚ್ಚಿ

ರಾಷ್ಟ್ರೀಯ

ಶ್ರೀ ಅಮೃತೇಶ್ವರ ದೇವಸ್ಥಾನ ಅಣ್ಣಿಗೇರಿ

ನವಲಗುಂದ ತಾಲೂಕಿನ ಅಣ್ಣಿಗೇರಿಯ ಅಮೃತೇಶ್ವರ ದೇವಸ್ಥಾನ

ಪ್ರಕಟಿಸಿದ ದಿನಾಂಕ: 22/12/2021

ಚಾಲುಕ್ಯ ದೊರೆ (೧೦೫೦) ಒಂದನೇ ಸೋಮೇಶ್ವರನ ಕಾಲದಲ್ಲಿ ನಿರ್ಮಾಣಗೊಂಡಿತು. ಹುಬ್ಬಳ್ಳಿ-ಗದಗ ರಸ್ತೆಯಲ್ಲಿ ಹುಬ್ಬಳ್ಳಿಯಿಂದ ೩೫ ಕಿ.ಮೀ. ದೂರದಲ್ಲಿದೆ. ಆದಿಕವಿ ಪಂಪ (೯೦೨) ಹುಟ್ಟಿದ ಸ್ಥಳ ಅಣ್ಣಿಗೇರಿ. ನಾಲ್ಕನೇಯ ಸೋಮೇಶ್ವರನ ರಾಜಧಾನಿಯಾಗಿ ಮತ್ತು ಹೊಯ್ಸಳ ದೊರೆ ವೀರ ಬಲ್ಲಾಳನ ಉಪರಾಜಧಾನಿಯಾಗಿಯೂ ಹಾಗೂ ದಕ್ಷಿಣದ ವಾರಾಣಾಸಿಯಾಗಿ ಅಣ್ಣಿಗೇರಿ ಪ್ರಸಿದ್ಧಿ ಪಡೆದಿತ್ತು. ಅಣ್ಣಿಗೇರಿಯಲ್ಲಿನ ಅಮೃತೇಶ್ವರ ದೇವಸ್ಥಾನ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಕಲ್ಯಾಣಿ ಚಾಲುಕ್ಯರ ಶೈಲಿಯ ದೇವಸ್ಥಾನವಾಗಿದೆ. ೭೬ ಕಂಬಗಳ ಗರ್ಭಗೃಹ ಅಂತರಾಳ, ನವರಂಗ, ಸಭಾಮಂಟಪ ಮತ್ತು ಗಜಲಕ್ಷ್ಮಿ ಶಿಲ್ಪಗಳನ್ನು ಒಳಗೊಂಡಿರುವ ಈ […]

ಇನ್ನಷ್ಟು ವಿವರ
ಶ್ರೀ ತಂಬೂರ್ ಬಸವಣ್ಣ ದೇವಸ್ಥಾನ

ತಂಬೂರ ಬಸವಣ್ಣನ ದೇವಸ್ಥಾನ, ಕಲಘಟಗಿ

ಪ್ರಕಟಿಸಿದ ದಿನಾಂಕ: 22/12/2021

ತಂಬೂರ ಗ್ರಾಮವು ಕಲಘಟಗಿಯಿಂದ ಯಲ್ಲಾಪೂರ ಮಾರ್ಗವಾಗಿ ೧೦ ಕಿ.ಮೀ. ಕ್ರಮಿಸಿದರೆ ಬಲಭಾಗಕ್ಕೆ ಸಿಗುವದೇ ತಂಬೂರ ಗ್ರಾಮ. ಅಮರಶಿಲ್ಪಿ ಜಕಣಾಚಾರ್ಯ ನಿರ್ಮಿಸಿದ ಶಿವ ದೇವಾಲಯ ತಂಬೂರ ಗ್ರಾಮದ ಆಕರ್ಷಕ ತಾಣ. ಇಲ್ಲಿನ ಶಿವ ದೇವಾಲಯ ತಂಬೂರ ಬಸವಣ್ಣನ ದೇಗುಲವೆಂದೇ ಪ್ರಖ್ಯಾತಗೊಂಡಿದೆ. ದೇವಾಲಯದ ಪ್ರವೇಶ ದ್ವಾರದಲ್ಲಿ ಆಕರ್ಷಕ ನವರಂಗ ಹಾಗೂ ಗರ್ಭಗುಡಿ ಇದ್ದು, ಹೆಣ್ಣು ದೇವತೆಯ ವಿಗ್ರಹವಿದೆ. ಪ್ರವೇಶ ದ್ವಾರದಲ್ಲಿ ವಿಘ್ನೇಶನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ನವರಂಗದಲ್ಲಿ ಬೃಹತ್ತಾಕಾರದ ಬಸವಣ್ಣನ ಮೂರ್ತಿವಿದ್ದು, ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಚಾಲುಕ್ಯರ ಕಾಲದಲ್ಲಿ ಈ ದೇವಾಲಯ ನಿರ್ಮಾಣಗೊಂಡಿತೆಂದು […]

ಇನ್ನಷ್ಟು ವಿವರ
ಶಂಭುಲಿಂಗೇಶ್ವರ ದೇವಸ್ಥಾನ ಕುಂದಗೋಳ

ಶಂಭುಲಿಂಗೇಶ್ವರ ದೇವಸ್ಥಾನ ಕುಂದಗೋಳ

ಪ್ರಕಟಿಸಿದ ದಿನಾಂಕ: 22/12/2021

ಧಾರವಾಡದಿಂದ ೪೦ ಕಿ.ಮೀ. ಹಾಗೂ ಹುಬ್ಬಳ್ಳಿಯಿಂದ ೨೦ ಕಿ.ಮೀ. ದೂರದಲ್ಲಿರುವ ಕುಂದಗೋಳ ತಾಲೂಕು ಕೇಂದ್ರವಾಗಿದೆ. ಇಲ್ಲಿನ ಶಂಭುಲಿಂಗೇಶ್ವರ ದೇವಸ್ಥಾನ ಹಾಗೂ ಬ್ರಹ್ಮ ದೇವಾಲಯಗಳು ಪ್ರಮುಖ ಆಕರ್ಷಣಿಯ ಕೇಂದ್ರ ಬಿಂದುವಾಗಿದೆ. ತಾಲೂಕು ಕೇಂದ್ರದಿಂದ ೮ ಕಿ.ಮೀ. ಅಂತರದಲ್ಲಿರುವ ಕಮಡೊಳ್ಳಿ ಗ್ರಾಮದಲ್ಲಿನ ಪ್ರಾಚೀನ ರಾಮೇಶ್ವರ, ಬಸವಣ್ಣ, ಕಲ್ಮೇಶ್ವರ ಹಾಗೂ ಸಿದ್ದಲಿಂಗೇಶ್ವರ ದೇವಸ್ಥಾನಗಳು ಕೂಡಾ ಪ್ರಮುಖವಾಗಿವೆ. ರಾಮೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ನಕ್ಷತ್ರಾ ಕಾರದಲ್ಲಿ ಬೃಹತ್ತಾದ ಶಿವಲಿಂಗವಿದೆ. ಸಭಾಮಂಟಪದಲ್ಲಿ ರಾಮಲಕ್ಷ್ಮಣರ ೪.೫ ಅಡಿ ಎತ್ತರದ ಶಿಲ್ಪಗಳಿವೆ. ಕುಂದಗೋಳದ ಶಂಭುಲಿಂಗೇಶ್ವರ ದೇವಾಲಯ ಪ್ರವಾಸಿಗರ ಅಚ್ಚುಮೆಚ್ಚಿನ […]

ಇನ್ನಷ್ಟು ವಿವರ
ಚಂದ್ರಮೌಳೇಶ್ವರ ದೇವಸ್ಥಾನ

ಚಂದ್ರಮೌಳೇಶ್ವರ ದೇವಸ್ಥಾನ

ಪ್ರಕಟಿಸಿದ ದಿನಾಂಕ: 22/12/2021

ಕ್ರಿ.ಶ. 9 ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರಿಂದ ನಿರ್ಮಾಣವಾದ ದೇವಸ್ಥಾನ. ಈ ದೇವಾಲಯ ಇತರೆ ಶಿವ ದೇವಾಲಯಗಳಿಗಿಂತ ವಿಭಿನ್ನವಾಗಿದೆ. ಎರಡು ದೊಡ್ಡ ಶಿವಲಿಂಗಗಳನ್ನು ಹೊಂದಿದೆ. ಹುಬ್ಬಳ್ಳಿ ತಾಲೂಕಿನ ಉಣಕಲ್ ಗ್ರಾಮದಲ್ಲಿದೆ. ಚಂದ್ರಮೌಳೇಶ್ವರ ಶಿವನ ಮತ್ತೊಂದು ಹೆಸರು. ದೇವಾಲಯ ಕಪ್ಪು ಗ್ರಾನೈಟ್ ಸ್ತಂಭಗಳಿಂದ ಕೂಡಿದೆ. ವಾಸ್ತುಶೈಲಿಯ ಉತ್ತಮ ಉದಾಹರಣೆ. ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ.

ಇನ್ನಷ್ಟು ವಿವರ